ಆಂಗ್ರಿಯ
 
ಪಶ್ಚಿಮ ಕರಾವಳಿಯ ಗಡಿರಕ್ಷಣೆಗಾಗಿ ಶಿವಾಜಿ ಸಿದ್ಧಪಡಿಸಿದ ನೌಕಾಸೇನೆಯ ಮುಖಂಡ. ರಾಜಾರಾಮನ ಕಾಲದವ. ವಂಶಪಾರಂಪರ್ಯವಾಗಿ ಆಂಗ್ರಿಯ ಮನೆತನದವರ ಮುಖಂಡತ್ವದಲ್ಲೇ ಬೆಳೆದು ಬಂದ ಈ ಸೇನೆ 18ನೆಯ ಶತಮಾನದವರೆಗೆ ಇಂಗ್ಲಿಷರಿಗೂ ಪೋರ್ಚುಗೀಸರಿಗೂ ಡಚ್ಚರಿಗೂ ವಿರುದ್ಧವಾಗಿ ಹೋರಾಡಿ ಕಾಲಕ್ರಮೇಣ ಆಂಗ್ರಿಯ ಮನೆತನದ ಒಳಜಗಳಗಳಿಂದಾಗಿ ಕ್ಷೀಣಿಸಿ 1920ರ ಹೊತ್ತಿಗೆ ಇಂಗ್ಲಿಷರಿಂದ ನಿರ್ನಾಮವಾಯಿತು.   					
(ಎಸ್.ಕೆ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ